Please wait... We are loading data for you!

ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ತರ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಪರಿಣಾಮಕಾರಿಯಾಗಿ ಬಳಸಿಕೊಳ್ಳೂವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅದರ ನಿದರ್ಶನವಾಗಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಈ ಹೊಸ ನಾಗರಿಕ ಪೋರ್ಟಲ್ ಅನ್ನು ಪ್ರಕಟಿಸಿದೆ.

ಆಡಳಿತದಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಈ ಜಾಲತಾಣವು ಮತ್ತೊಂದು ಬಲಿಷ್ಠ ಹೆಜ್ಜೆಯಾಗಿದೆ. ಈ ಪೋರ್ಟಲ್ ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಪ್ರಕಟವಾದ ಸರ್ಕಾರಿ ಆದೇಶಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇ-ಆಫೀಸ್ ಭಾರತ ಸರ್ಕಾರದ ಇ-ಆಡಳಿತ ಯೋಜನೆಯಡಿ “ತಂತ್ರಾಂಶ ಆಧಾರಿತ ಯೋಜನೆ” ಆಗಿದೆ. ಈ ತಂತ್ರಾಂಶವನ್ನು ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ) ಅಭಿವೃದ್ಧಿಪಡಿಸಿದೆ ಮತ್ತು ಇ-ಆಡಳಿತ ಕೇಂದ್ರವು ರಾಜ್ಯದಲ್ಲಿ ಇದರ ಅನುಷ್ಠಾನವನ್ನು ನೋಡಿಕೊಳ್ಳುತ್ತಿದೆ.


×
ABOUT DULT ORGANISATIONAL STRUCTURE PROJECTS