Please wait... We are loading data for you!

Home

Back
ನಮ್ಮ ಬಗ್ಗೆ

ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ತರ ಧ್ಯೇಯದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಪರಿಣಾಮಕಾರಿಯಾಗಿ ಬಳಸಿಕೊಳ್ಳೂವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅದರ ನಿದರ್ಶನವಾಗಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಈ ಹೊಸ ನಾಗರಿಕ ಪೋರ್ಟಲ್ ಅನ್ನು ಪ್ರಕಟಿಸಿದೆ.

 

ಆಡಳಿತದಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಈ ಜಾಲತಾಣವು ಮತ್ತೊಂದು ಬಲಿಷ್ಠ ಹೆಜ್ಜೆಯಾಗಿದೆ. ಈ ಪೋರ್ಟಲ್ ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಪ್ರಕಟವಾದ ಸರ್ಕಾರಿ ಆದೇಶಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇ-ಆಫೀಸ್ ಭಾರತ ಸರ್ಕಾರದ ಇ-ಆಡಳಿತ ಯೋಜನೆಯಡಿ “ತಂತ್ರಾಂಶ ಆಧಾರಿತ ಯೋಜನೆ” ಆಗಿದೆ. ಈ ತಂತ್ರಾಂಶವನ್ನು ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ) ಅಭಿವೃದ್ಧಿಪಡಿಸಿದೆ ಮತ್ತು ಇ-ಆಡಳಿತ ಕೇಂದ್ರವು ರಾಜ್ಯದಲ್ಲಿ ಇದರ ಅನುಷ್ಠಾನವನ್ನು ನೋಡಿಕೊಳ್ಳುತ್ತಿದೆ.

×
ABOUT DULT ORGANISATIONAL STRUCTURE PROJECTS